Are you unable to read text? Download FontHide

ರಾಯಚೂರು: ಅಪ್ರಾಪೆ¤ ಮೇಲೆ ಅತ್ಯಾಚಾರ

ಲಿಂಗಸುಗೂರು: ಬೆಳಗಾವಿ ಜಿಲ್ಲೆ ಇಟ್ನಾಳದಲ್ಲಿ ಕಾಮುಕರ ಕಾಮತೃಷೆಗೆ ಪಿಯು ವಿದ್ಯಾರ್ಥಿನಿ ಬಲಿಯಾದ ಘಟನೆ ಮಾಸುವ ಮುನ್ನವೇ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದ ಪ್ರಕರಣ ವರದಿಯಾಗಿದೆ.
ಲಿಂಗಸುಗೂರು ಪಟ್ಟಣದ ಸಂತೆ ಬಜಾರ್‌ ನಿವಾಸಿ ಅಮರೇಶ ಅಲಿಯಾಸ್‌ ಗುಂಡ್ಯಾ (23) ಎಂಬ ಯುವಕ ಬಾಲಕಿಯನ್ನು ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರದ ಬಳಿಕ ಆರೋಪಿ ನಾಪತ್ತೇಯಾಗಿದ್ದಾನೆ. ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.